Coma latest updates

Monday

Sad Story of Coma Kannada Movie Team....ಕೋಮಾ ಸಿನಿಮಾ ಕಣ್ಣೀರ ಕಥೆ...!


ಒಂದು ಅಪ್ಪಟ ಕನ್ನಡದ ಹೊಸ ತಂಡ ಬಂದು ಒಂದೊಳ್ಳೆ ಸಿನಿಮಾ ಮಾಡಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೇಗೆ ತಮ್ಮ ಕನಸುಗಳ ಜೊತೆ ಮುಳುಗಿ ಹೋಗ್ತಾರೆ ಅನ್ನೋದಕ್ಕೆ ಸಾಕ್ಷಿ ಈ ವೀಡಿಯೋ..! ಕೋಮಾ ಅನ್ನೋ ಒಂದು ಒಳ್ಳೆಯ ಸಿನಿಮಾ ಹೇಗೆ ಕೊಚ್ಚಿ ಹೋಗ್ತಿದೆ ಅಂತ ಇದನ್ನು ನೋಡಿದ್ರೆ ನಿಮಗೂ ಗೊತ್ತಾಗುತ್ತೆ...! ದಯಮಾಡಿ ಈ ವೀಡಿಯೋ ಸಂಪೂರ್ಣವಾಗಿ ನೋಡಿ...




COMA - Kannada movie promotion ideas




Coma Leaked Scenes Especially For IT Guys!



COLOURFULL COMA - Sandalwood Movie Coma now running in theaters near you




ತಲೆಮಾರುಗಳ ತಳಮಳ!


‘ಕೋಮಾ’ ಎಂಬ ಪದ ಕಿವಿಗೆ ಬಿದ್ದರೆ ಎರಡು ಸಂಗತಿಗಳು ನೆನಪಾಗುತ್ತವೆ. ಒಂದು, ಕೋಮಾ ಹಂತ ತಲುಪಿರುವ ರೋಗಿ. ಮತ್ತೊಂದು, ‘ಓಂ’ ಚಿತ್ರದ ‘ಕೋಮಾ ಕೋಮಾ..’ ಹಾಡು. ಇನ್ನುಮುಂದೆ, ‘ಕೋಮಾ’ ಎಂದರೆ ಮತ್ತೊಂದು ಸಂಗತಿ ನೆನಪಾಗುವಂತೆ ಮಾಡಲು ಹೊರಟಿದ್ದಾರೆ ನಿರ್ದೇಶಕರಾದ ರವಿ ಮತ್ತು ಚೇತನ್. ಈ ಜೋಡಿ ವರ್ಷದ ಹಿಂದೆಯೇ ಸದ್ದಿಲ್ಲದೆ, ‘ಕೋಮಾ’ ಎಂಬ ಚಿತ್ರಕ್ಕೆ ಕೈಹಾಕಿತ್ತು. ಇದೀಗ ಆ ಚಿತ್ರ ಸಂಪೂರ್ಣಗೊಂಡಿದ್ದು, ಇಂದು (ಮೇ 27) ತೆರೆಗೆ ಬರಲಿದೆ.

ಮನುಷ್ಯನಿಗೆ ಸಾಮಾನ್ಯವಾಗಿ ಅತೀ ದುಃಖವಾದಾಗ ಅಥವಾ ಅತೀ ಸಂತಸವಾದಾಗ ಆತನ ಮೈಂಡ್ ಬ್ಲಾಂಕ್ ಆಗುತ್ತದೆ. ಒಂದರೆಕ್ಷಣ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಚಿತ್ರತಂಡದ ಪ್ರಕಾರ, ಇದನ್ನು ಒಂದು ಕ್ಷಣದ ಕೋಮಾ ಎನ್ನುತ್ತಾರಂತೆ! ಆ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಈ ‘ಕೋಮಾ’ ಚಿತ್ರ ಸಿದ್ಧವಾಗಿದೆ. ‘ನಮ್ಮ ಚಿತ್ರದಲ್ಲಿ ಈ ಥರದ ಕೋಮಾ ಕ್ಷಣಗಳು ಬೇಕಾದಷ್ಟಿವೆ. ಅದನ್ನು ನಿಮಗೆ ಪರಿಚಯಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕರಲ್ಲಿ ಒಬ್ಬರಾದ ರವಿ. ಇನ್ನು, ಇದುವರೆಗೂ ಕ್ಯಾಮರಾ ಪ್ರವೇಶಿಸದಂಥ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆ ಮತ್ತೋರ್ವ ನಿರ್ದೇಶಕ ಚೇತನ್. ಮುಖ್ಯವಾಗಿ ‘ಕೋಮಾ’ ಹೊಸ ತಲೆಮಾರು ಮತ್ತು ಹಳೇ ತಲೆಮಾರಿನ ಸ್ಪರ್ಧೆಯನ್ನು ಹೇಳುತ್ತದೆಯಂತೆ. ಹೊಸ ತಲೆಮಾರನ್ನು ಪ್ರತಿನಿಧಿಸಲು ‘ಮಠ’ ಗುರುಪ್ರಸಾದ್ ಇದ್ದರೆ, ಹಳೇ ತಲೆಮಾರಿನ ನೇತೃತ್ವವನ್ನು ಹಿರಿಯ ನಿರ್ದೇಶಕ ಭಗವಾನ್ ವಹಿಸಿಕೊಂಡಿದ್ದಾರೆ. ‘ಒಬ್ಬರು ಕಥೆಗೆ ಪ್ರಾಮುಖ್ಯತೆ ಎಂದರೆ, ಮತ್ತೊಬ್ಬರು ಚಿತ್ರಕಥೆಗೆ ಪ್ರಾಮುಖ್ಯತೆ ಇರಬೇಕು ಎನ್ನುತ್ತಾರೆ. ಹೀಗೆ ಈ ಇಬ್ಬರು ಖ್ಯಾತ ನಿರ್ದೇಶಕರ ಜುಗಲ್​ಬಂಧಿಯೂ ಚಿತ್ರದಲ್ಲಿದೆ’ ಎನ್ನುತ್ತಾರೆ ಚೇತನ್. ಸಾಮಾನ್ಯವಾಗಿ ಪ್ರೇಮಕಥೆ ಇರುವ ಸಿನಿಮಾಗಳಲ್ಲಿ ಪ್ರೀತಿ ಗೆಲ್ಲುತ್ತದೆ ಅಥವಾ ಸೋಲುತ್ತದೆ. ಆದರೆ ‘ಕೋಮಾ’ದಲ್ಲಿ ಇವೆರಡನ್ನು ಬಿಟ್ಟು ಬೇರೆ ಮತ್ತೇನನ್ನೋ ಹೇಳಲಿದ್ದಾರಂತೆ ನಿರ್ದೇಶಕರು.

ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಕಾರ್ತಿಕ್ ಮತ್ತು ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನನ್ ಲೈಫಲ್ಲೂ ಇದು ಕೋಮಾ ಕ್ಷಣ’ ಎನ್ನುವುದು ಕಾರ್ತಿಕ್ ಅಭಿಪ್ರಾಯವಾದರೆ, ಶ್ರುತಿಗೆ ಸಿನಿಮಾದಲ್ಲಿ ನಟಿಸಿದ್ದು ಖುಷಿ ನೀಡಿದೆ. ಈ ಹಿಂದೆ ‘ಉಪ್ಪಿ 2’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸತತ ಪರಿಶ್ರಮದಿಂದಾಗಿ ಈ ಅವಕಾಶ ಪಡೆದುಕೊಂಡಿದ್ದಾರಂತೆ. ಮೂಲತಃ ಕ್ಲಾಸಿಕಲ್ ಡಾನ್ಸರ್ ಆಗಿರುವ ಶ್ರುತಿ, ಆಡಿಷನ್ ಮೂಲಕ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಂಜನಾಗೆ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ.

‘ಕೋಮಾ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರ್ದೇಶಕ ಭಗವಾನ್, ‘ದೊರೆ-ಭಗವಾನ್ ಎಂಬುದು ಕನ್ನಡದಲ್ಲಿ ಖ್ಯಾತ ನಿರ್ದೇಶಕ ಜೋಡಿ. ಅಂತೆಯೇ ರವಿ ಮತ್ತು ಚೇತನ್ ಕೂಡ ಖ್ಯಾತಿ ಪಡೆಯಲಿ. ಹೊಸಬರ ಜತೆ ಸೇರಿದ ಪರಿಣಾಮ, ನಾನಿನ್ನು ಯುವಕ ಎಂಬ ಫೀಲ್ ನನಗೆ ಬಂದಿದೆ. ಇಂದು ಹೊಸಬರ ಚಿತ್ರಕ್ಕೆ ಬೆಂಬಲ ಜಾಸ್ತಿ ಸಿಗುತ್ತಿದೆ. ಈ ಚಿತ್ರಕ್ಕೂ ಬೆಂಬಲ ಸಿಗಲಿ’ ಎಂದು ಹಾರೈಸುತ್ತಾರೆ.
Source: Vijayavani

‘ಕೋಮಾ’ ತಂದುಕೊಟ್ಟ ಪುಲಕ!

‘ಕೋಮಾ’ ವೈದ್ಯಕೀಯ ವಿಜ್ಞಾನದ ಪದ. ಈ ಪದಕ್ಕೂ ನಿಮ್ಮ ಸಿನಿಮಾಕ್ಕೂ ಸಂಬಂಧ ಇದೆಯೇ? ಎನ್ನುವ ಪ್ರಶ್ನೆ ಕೇಳಿದರೆ ನಾಯಕ ಕಾರ್ತಿಕ್ ಮುಗುಳ್ನಗುತ್ತಾರೆ.ನಗುತ್ತಲೇ– ‘ಕೋಮಾ, ಪ್ರೀತಿ–ಪ್ರೇಮ,  ಥ್ರಿಲ್ಲರ್.. ಹೀಗೆ ಒಂದು ವಿಶೇಷ ವರ್ಗದ ಚಿತ್ರ ಎಂದು ಗೆರೆ ಎಳೆದು ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ.
ಇಂದು (ಮೇ 27) ತೆರೆ ಕಾಣುತ್ತಿರುವ ‘ಕೋಮಾ’ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆದಿರುವ ಕಾರ್ತಿಕ್‌ಗೆ ಈ ಚಿತ್ರ ನಿರೀಕ್ಷೆಗಳ ಆಗರ. ಕೋಲಾರ ಜಿಲ್ಲೆಯ ಮಾಲೂರಿನ ಕಾರ್ತಿಕ್, ಬಾಲ್ಯದಲ್ಲಿ ಶಾಲೆಯ ವೇದಿಕೆಗಳಲ್ಲಿ ಶಿಕ್ಷಕರ ಒತ್ತಾಯಕ್ಕೆ ನೃತ್ಯ ಮಾಡಿದವರು.
ನಂತರದ ದಿನಗಳಲ್ಲಿ ನೃತ್ಯವೇ ಅವರ ಟ್ರೇಡ್‌ಮಾರ್ಕ್‌ ಆಗಿ ಪರಿಣಮಿಸಿತು. ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ ತಮ್ಮದೇ ಆದ ನೃತ್ಯತಂಡ ಕಟ್ಟಿ ಊರೂರು ಸುತ್ತಿ ಕಾರ್ಯಕ್ರಮ ನೀಡಿದರು. ಖಾಸಗಿ ವಾಹಿನಿಗಳ ನೃತ್ಯ ಸ್ಪರ್ಧೆಗಳಲ್ಲಿ ಮೈ ಬಳುಕಿಸಿದರು. ಹೀಗೆ ನೃತ್ಯಕ್ಕೆ ಸೀಮಿತವಾಗಿದ್ದವರಿಗೆ ನಟನೆಯ ಆಸೆ ಹಚ್ಚಿದ್ದು ಕಿರುಚಿತ್ರಗಳು.
ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ಬಿಡುವಿನ ಅವಧಿಯಲ್ಲಿ ಕಿರುಚಿತ್ರ ರೂಪಿಸಿದ ಕಾರ್ತಿಕ್ ‘ನಾನೇಕೆ ಬೆಳ್ಳಿ ತೆರೆಯ ನಟನಾಗಬಾರದು’ ಎನಿಸಿದ್ದೇ ತಡ, ಸಾಗಿದ್ದು ಮುಂಬೈನ ಅನುಪಮ್ ಖೇರ್ ನಟನೆಯ ತರಬೇತಿ ಶಾಲೆಗೆ.
ಬೆಂಗಳೂರಿನ ಗಾಂಧಿನಗರ ಪ್ರವೇಶಿಸಿದ ಕಾರ್ತಿಕ್ ‘ಚಿರವಾದ ನೆನಪು’ ಚಿತ್ರದಲ್ಲಿ ಸಣ್ಣ ಪಾತ್ರ ದಕ್ಕಿಸಿಕೊಳ್ಳುವ ಮೂಲಕ ತೆರೆಯಲ್ಲಿ ಚಿಗುರುವ ವಿಶ್ವಾಸ ಗಳಿಸಿಕೊಂಡರು. ಆ ಸಣ್ಣ ಪಾತ್ರದಲ್ಲಿನ ಉತ್ತಮ ನಟನೆ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ರವಿ ಮತ್ತು ಚೇತನ್‌ರ ಗಮನ ಸೆಳೆಯಿತು. ಕೆಲ ದಿನಗಳಲ್ಲಿಯೇ ರವಿ ಮತ್ತು ಚೇತನ್‌ ಕೂಡಿ ನಿರ್ದೇಶಿಸಿದ ‘ಕೋಮಾ’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾದರು. ಈಗ ಆ ಚಿತ್ರ ತೆರೆಕಾಣುತ್ತಿರುವ ಸಂಭ್ರಮ ಅವರದು.
‘ನಾನು ಈ ಸಿನಿಮಾದಲ್ಲಿ ಚಿತ್ರಕಥೆಯಿಂದಲೇ ಭಾಗಿಯಾಗಿದ್ದೇನೆ. ನಾವು ಇಲ್ಲಿಯವರೆಗೂ ಚಿತ್ರೀಕರಣ ಮಾಡದ ಅಜ್ಞಾತ ಸ್ಥಳಗಳಲ್ಲಿ ಕ್ಯಾಮೆರಾ ಇಟ್ಟಿದ್ದೇವೆ. ಚಿತ್ರೀಕರಣಕ್ಕೂ ಪೂರ್ವದಲ್ಲಿ ನಾವು ಏನನ್ನು ಹೇಳಬೇಕು ಮತ್ತು ಕಥೆಯನ್ನು ಯಾವ ರೀತಿ ಕಟ್ಟಕೊಡಬೇಕು ಎಂದುಕೊಂಡಿದ್ದೆವೋ ಅದು ಶೇ 100 ಇಲ್ಲಿ ಪೂರ್ಣವಾಗಿದೆ’ ಎಂದು ಹೇಳುತ್ತಾರೆ.
‘ಕೋಮಾ ಏಕೆ, ಏನು ಎನ್ನುವುದು ಚಿತ್ರದ ವಿಶೇಷ. ಬದುಕಿನಲ್ಲಿ ಭಯ, ಆಸೆ ಇತ್ಯಾದಿ ಕ್ಷಣಗಳು ಒರುತ್ತದೆ. ಆ ಕ್ಷಣಗಳೇ ಕೋಮಾ. ಎರಡು ತಲೆಮಾರುಗಳ ನಡುವಿನ ಅಂತರದಿಂದ ಆರಂಭವಾಗುವ ಕಥೆ ಇದು. ಇದರೊಳಗೆ ಒಂದು ಕಥೆ ಇದೆ. ಕಥೆ ಏಕೆ ಬರುತ್ತದೆ, ಹೇಗೆ ಬರುತ್ತದೆ ಎನ್ನುವುದೂ ಪ್ರಮುಖ. ಅಂತಿಮವಾಗಿ ಹಿರಿಯ ನಿರ್ದೇಶಕ ಭಗವಾನ್ ಅವರು ನಿರ್ದೇಶಕ ಗುರುಪ್ರಸಾದ್‌ಗೆ ಸ್ಮರಣಿಕೆ ನೀಡುತ್ತಾರೆ. ಅಲ್ಲಿಗೆ ಚಿತ್ರ ಕೊನೆಯಾಗುತ್ತದೆ’ ಎನ್ನುವ ಅವರು, ತಮ್ಮ ಬದುಕಿಗೆ ಹತ್ತಿರದ ಪಾತ್ರ ಮಾಡಿದ್ದಾರಂತೆ.
‘ಕೋಮಾ’ ಚಿತ್ರದಲ್ಲಿನ ಟ್ರೇಲರ್ ಕಾರ್ತಿಕ್‌ಗೆ ನಾಲ್ಕೈದು ಅವಕಾಶಗಳನ್ನು ದೊರಕಿಸಿಕೊಟ್ಟಿದೆ. ‘ಈಗಾಗಲೇ ಐದು ಚಿತ್ರಗಳಲ್ಲಿ ನಟಿಸುವ ಆಹ್ವಾನ ಬಂದಿದೆ. ಒಂದು ಚಿತ್ರಕಥೆ ತುಂಬಾ ಇಷ್ಟವಾಗಿದೆ. ‘ಕೋಮಾ’ ನನ್ನ ಲೈಫ್ ಇದ್ದಂತೆ. ಹೆಚ್ಚು ತೃಪ್ತಿ ನೀಡಿದೆ’ ಎನ್ನುವ ಕಾರ್ತಿಕ್‌ ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡುವರು.      
***
ಹೊಸಬರ ‘ಕೋಮಾ’

ಈ ಹಿಂದೆ ಕೆಲವು ಕಿರುಚಿತ್ರ – ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿರುವ ರವಿಕಿರಣ್ ಹಾಗೂ ಚೇತನ್ ಜಂಟಿಯಾಗಿ ಆಕ್ಷನ್–ಕಟ್ ಹೇಳಿರುವ ಚೊಚ್ಚಿಲ ಚಿತ್ರ ‘ಕೋಮಾ’. ಹೊಸಬರಾದ ಕಾರ್ತಿಕ್, ಶ್ರುತಿ ನಂದೀಶ್, ರಂಜನಾ ಮಿಶ್ರಾ ತಾರಾಗಣದಲ್ಲಿರುವ ಪ್ರಮುಖರು.
‘ಕೋಮಾ’ ಅನ್ನುವುದು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ಅದು ಯಾವಾಗ ಪ್ರಕಟಗೊಳ್ಳುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಅದು ಯಾವಾಗ ಬೇಕಾದರೂ ಯಾವ ರೀತಿಯಲ್ಲಾದರೂ ಬರಬಹುದು ಎನ್ನುವುದು ನಿರ್ದೇಶಕ ರವಿ ಅನಿಸಿಕೆ. ಅಂದಹಾಗೆ, ಈ ಚಿತ್ರ ಒಂದು ಹಂತಕ್ಕೆ ಬರಲು ಆರು ವರ್ಷ ಬೇಕಾಯಿತಂತೆ.
ಘಾಟಿಕಲ್ಲು, ಸಕಲೇಶಪುರ, ಹೊರನಾಡು ಇತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ನಿರ್ದೇಶಕ ಭಗವಾನ್ ಮತ್ತು ಯುವ ನಿರ್ದೇಶಕ ಗುರುಪ್ರಸಾದ್ ಅಭಿನಯಿಸಿದ್ದಾರೆ. ಅವರಿಬ್ಬರ ಮಧ್ಯೆ ನಡೆಯುವ ವಾದ, ವಿವಾದಗಳೇ ಚಿತ್ರದ ಹೈಲೈಟ್‌!
‘ಉಪ್ಪಿ–2’ ಚಿತ್ರರಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಶ್ರುತಿ, ವೃತ್ತಿಯಲ್ಲಿ ಟೆಕ್ಕಿ. ಕಥಕ್ ನೃತ್ಯದಲ್ಲಿ ಆಸಕ್ತಿ ಇರುವ ಅವರು ಕೂಡ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ. ಇವರ ಜತೆ ಸುಚೇಂದ್ರಪ್ರಸಾದ್, ಅಜಿತ್‌ಕುಮಾರ್ ನಟನೆ ಇದೆ. ರಾಜು ಸೆಲ್ವಂ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಒಟ್ಟು ಐದು ಹಾಡುಗಳಿದ್ದು, ಆಶಿಕ್ ಅರುಣ್ ಸಂಗೀತ  ಸಂಯೋಜಿಸಿದ್ದಾರೆ. ಕಾರ್ತಿಕ್‌ ಮಲ್ಲೂರ್ ಕ್ಯಾಮೆರಾ ಹಿಡಿದಿದ್ದಾರೆ. 100 ಚಿತ್ರಮಂದಿರಗಳಲ್ಲಿ ‘ಕೋಮಾ’ ತೆರೆ ಕಾಣುತ್ತಿದೆ. 

COMA Audio Songs, COMA Kannada Movie Audio Songs Juke Box | Dorai Bhagavan, Guruprasad, Karthik Kumar V, Shruthi

ಕೋಮಾ Songs
COMA  Audio Juke Box

Movie Coma
Cast :  Dorai Bhagavan, Guruprasad, Karthik Kumar V, Shruthi Nandeesh, Ajith, Andrew, Ranjana                   Mishra, juli Manjunath, Mahesh,
Music : Ashic Arun
Producer : Raja Selvam, Ravi & Chethan
Director : Ravi & Chethan


*Song Credits*

Song : Coma
Singer : Gubbi, Rinosh George
Lyrics : Gubbi
Song : Tanmaya Vismaya
Singer : Karthik, Ashic Arun
Lyrics : Chethan S P

Song : Paravasha
Singer : Benny Dayal, Anjali Bhat
Lyrics : Chethan S P

Song : O Manase
Singer : Ashic Arun
Lyrics : Kiran Kaverappa

Song : Tanmaya Unplugged
Singer : Ashic Arun
Lyrics : Chethan S P

Tanmaya Vismaya Video Song From Coma kannada movie,Karthik Kumar V, Shruthi Nandeesh,

ಕೋಮಾ  Tanmaya Vismaya Video Song


Movie Coma
Cast : : Dorai Bhagavan, Guruprasad,Karthik Kumar, Shruthi Nandeesh, Ajith, Andrew, Ranjana Mishra, Shille Manjunath, Mahesh
Song : Tanmaya Vismaya
Singer : Karthik, Ashic Arun
Lyrics : Chethan S P
Music : Ashic Arun
Producer : Raja Selvam, Ravi & Chethan
Director : Ravi & Chethan




COMA Kannada Movie Video Song COMA (Rap Version) | Karthik Kumar V, Shruthi Nandeesh

Presenting The Rap Song From COMA Kannada Movie




Movie Coma
Cast : Karthik Kumar, Shruthi Nandeesh, Ajith, Andrew, Ranjana Mishra, Shille Manjunath, Mahesh, Dorai Bhagavan, Guruprasad
Song : Coma Rap Version
Singer : Gubbi, Rinosh George
Lyrics : Gubbi
Music : Ashic Arun
Producer : Raja Selvam, Ravi & Chethan
Director : Ravi & Chethan

COMA Kannada Movie Trailer with English Subtitles,Karthik Kumar V, Shruthi Nandeesh

ಕೋಮಾ Kannada New Movie
Coma Trailer




COMA Kannada Movie
Cast : : Dorai Bhagavan, Guruprasad,Karthik Kumar V, Shruthi Nandeesh, Ajith, Andrew, Ranjana Mishra, Shille Manjunath, Mahesh
Music : Ashic Arun
Producer : Raja Selvam, Ravi & Chethan
Director : Ravi & Chethan

Songs JukeBox

Kannada Live Tv Channels

Related Posts Plugin for WordPress, Blogger...